KOF Raichur Recruitment 2021 – 17 Sales Assistant, Driver & Other Posts|check Eligibility criteria

- July 09, 2021
KOF Raichur Recruitment 2021ಕರ್ನಾಟಕ ತೈಲ ಒಕ್ಕೂಟ ರಾಯಚೂರು ಜುಲೈ 2021 ರ ಕೆಒಎಫ್ ರಾಯಚೂರ್ ಅಧಿಕೃತ ಅಧಿಸೂಚನೆಯ ಮೂಲಕ ಖಾಲಿರುವ ಸಹಾಯಕ ವ್ಯವಸ್ಥಾಪಕರು,ಮಾರಾಟಸಹಾಯಕರು,ಬೆರಳುಚ್ಚುಗಾರರು ಹಾಗೂ ಚಾಲಕರು ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ರಾಯಚೂರು - ಕರ್ನಾಟಕ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು, ಅರ್ಜಿ ಸಲ್ಲಿಸಲು ಕೊನೆ ದಿನಾಂಕ 23-ಜುಲೈ -2021 05:30 PM.
ಈ ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಒಟ್ಟು ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವಯಸ್ಸಿನ ಮಿತಿ,ಆಯ್ಕೆಯ ವಿಧಾನ, ಅರ್ಜಿ ಸಲ್ಲಿಕೆ ವಿಧಾನ,ಅರ್ಜಿ ಶುಲ್ಕ ಮತ್ತು ಹೇಗೆ ಅನ್ -ಲೈನ್ ಅರ್ಜಿಯನ್ನು ಸಲ್ಲಿಸಬೇಕು ಹಾಗೂ ಇತರ ವಿವರಗಳನ್ನು ಕೆಳಗೆ ನೀಡಲಾಗಿದೆ …

ಸಂಸ್ಥೆ ಹೆಸರು: ಕರ್ನಾಟಕ ತೈಲ ಒಕ್ಕೂಟ ರಾಯಚೂರು (ಕೆಒಎಫ್ ರಾಯಚೂರ್)

ಹುದ್ದೆ ಹೆಸರು:ಸಹಾಯಕ ವ್ಯವಸ್ಥಾಪಕರು,ಮಾರಾಟ ಸಹಾಯಕರು,ಬೆರಳುಚ್ಚುಗಾರರು ಹಾಗೂ ಚಾಲಕರು

ಹೆಚ್ಚಿನ ಮಾಹಿತಿಗಾಗಿ ಕೆಳಗೆ ಕೊಟ್ಟಿರುವ ಅಧಿಸೂಚನೆ ಅಧಿಸೂಚನೆ ಓದಿಕೊಳ್ಳಿ.

ಉದ್ಯೋಗ ಸ್ಥಳ : ರಾಯಚೂರು

ಖಾಲಿಯಿರುವ ಒಟ್ಟು ಹುದ್ದೆಗಳ ಸಂಖ್ಯೆ : 17 ಹುದ್ದೆಗಳು

ಶೈಕ್ಷಣಿಕ ಅರ್ಹತೆ : ಅಭ್ಯರ್ಥಿಗಳು ಕನಿಷ್ಠ ಸ್ನಾತಕೋತ್ತರ ಪದವಿ, ಎಂ.ಕಾಂ, ಬಿ.ಕಾಂ/ಬಿಬಿಎಂ, ಐಟಿಐ, ಡಿಪ್ಲೋಮಾ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ಸಂಸ್ಥೆ/ವಿಶ್ವವಿದ್ಯಾಲಯದಿಂದ ಹೊಂದಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು.

ಅಗತ್ಯವಿರುವ ವಯೋಮಾನ : ಹುದ್ದೆಗಳಿಗನುಸಾರ ಕನಿಷ್ಟ 18 ರಿಂದ ಗರಿಷ್ಟ 35 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು. ಅಭ್ಯರ್ಥಿಗಳಿಗೆ ನೇಮಕಾತಿ ನಿಯಮಾನುಸಾರ ವಯೋಮಿತಿ ಸಡಿಲಿಕೆಯನ್ನು ನೀಡಲಾಗಿರುತ್ತದೆ.

ವೇತನ ಶ್ರೇಣಿ : ಸಹಾಯಕ ವ್ಯವಸ್ಥಾಪಕರು (ಬೀಜ) 40,900/- ರಿಂದ 78,200/-ರೂ, ಸಹಾಯಕ ವ್ಯವಸ್ಥಾಪಕರು (ವಿತ್ತ) 40,900/- ರಿಂದ 78,200/-ರೂ, ಮಾರಾಟ ಸಹಾಯಕರು, ಟೆಕ್ನಿಕಲ್ ಅಸಿಸ್ಟೆಂಟ್, ಬೆರಳಚ್ಚುಗಾರರು, ಚಾಲಕರು 21,400/- ರಿಂದ 42,000/-ರೂ ವೇತನವನ್ನು ನೀಡಲಾಗುವುದು.

ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೆರಿಟ್ ಆಧಾರದ ಮೇಲೆ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು.

ಅರ್ಜಿ ಸಲ್ಲಿಸುವ ವಿಧಾನ: ಒಕ್ಕೂಟದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅಧಿಸೂಚನೆಯಲ್ಲಿ ನೀಡಲಾಗಿರುವ ಅರ್ಜಿ ನಮೂನೆಯಲ್ಲಿ ಅರ್ಜಿಯನ್ನು ಬೆರಳಚ್ಚು ಮಾಡಿಸಿ ಪೂರ್ಣ ವಿವರಗಳೊಂದಿಗೆ ಭರ್ತಿ ಮಾಡಿ ಜೊತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ ಕಚೇರಿಗೆ ಜುಲೈ 23,2021ರ ಸಂಜೆ 5:30ರೊಳಗೆ ಸಲ್ಲಿಸುವುದು. ಅರ್ಜಿಗಳನ್ನು ಆಫ್‌ಲೈನ್ ನಲ್ಲಿ ಮಾತ್ರ ಸಲ್ಲಿಸುವುದು. ಆನ್‌ಲೈನ್ ನಲ್ಲಿ ಅವಕಾಶವಿರುವುದಿಲ್ಲ.

ಕಚೇರಿ ವಿಳಾಸ:
ವ್ಯವಸ್ಥಾಪಕ ನಿರ್ದೇಶಕರು,
ಪ್ರಾದೇಶಿಕ ಎಣ್ಣೆಬೀಜ ಬೆಳೆಗಾರರ ಸಹಕಾರ,
ಸಂಘಗಳ ಒಕ್ಕೂಟ ನಿಯಮಿತ,
ಪೋಸ್ಟ್ ಬಾಕ್ಸ್ ಸಂಖ್ಯೆ : 328
ಇಂಡಸ್ಟ್ರಿಯಲ್ ಏರಿಯಾ, ಹೈದರಾಬಾದ್ ರೋಡ್,
ರಾಯಚೂರು-584 102.

Important Link:

Click Here To Download Notification

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ:
ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 21-06-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 23-Jul-2021 05:30 PM


EmoticonEmoticon

 

Start typing and press Enter to search